Fordesis - Articles

Unlock your phone
www.gophoto.com





www.gophoto.com

Unlock your phone



www.gophoto.com

Unlock your phone

ಅಮೇರಿಕಾದ ಕನೆಕ್ಟಿಕಟ್ನಲ್ಲಿ ಹೇಮಂತ ಗಾನ !

ಎತ್ತ ನೋಡಿದರೂ ಬಿಳಿ ಹಿಮದ ಗುಡ್ಡೆಗಳು, ಮೈ ಕೊರೆಯುತ್ತಿರುವ ಚಳಿಗಾಳಿ, ಬಿಳಿ ಹಿಮದ ಮೇಲೆ ಬಿದ್ದು ಕಣ್ಣು ಕೋರೈಸುತ್ತಿರುವ ಸೂರ್ಯನ ಕಿರಣಗಳು ...ಇವೆಲ್ಲದರ ಮಧ್ಯೆ ಎಲ್ಲಿಂದಲೋ ಕೇಳಿ ಬರುತ್ತಿರುವ " ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ..ಏನು ನಿನ್ನ ಚಿಂತೆ? ಹೇಳೇ ನನ್ನ ಕಾಂತೆ ....." ಎಂಬ ಧ್ವನಿ ಸುರಳಿ ...ಯಾರಪ್ಪ ಇದು ... ದೂರದ ಅಮೆರಿಕಾದಲ್ಲಿ ಅದರಲ್ಲೂ ನಡುಗುವ ಚಳಿಯಲ್ಲಿ ಹಾಡುತ್ತಾ ಬೇಸರಿಸಿಕೊಂಡಿರುವ ನಲ್ಲೆಯನ್ನು ಸಂತೈಸುತ್ತಿರುವುದು ? ಅಂತ ಯೋಚಿಸುತ್ತಾ ನೋಡಿದರೆ .. ಹಾಡು ಕೇಳಿ ಬಂದಿದ್ದು ಕನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟ ಆಯೋಜಿಸಿದ್ದ "ಹೇಮಂತ ಗಾನ" ಸಂಗೀತ ಸಂಜೆಯಲ್ಲಿ !

ಜನವರಿ ೨೨ , ಶನಿವಾರದಂದು ಕನೆಕ್ಟಿಕಟ್ನಲ್ಲಿರುವ ಶ್ರೀ ಸ್ವಾಮಿ ಸತ್ಯನಾರಾಯಣ ದೇವಸ್ಥಾನದ ಆಡಿಟೋರಿಯಮ್ನಲ್ಲಿ ನಡೆದ ಗಾನ ಸಂಜೆಗೆ ನೂರಾರು ಹೊರನಾಡ ಕನ್ನಡಿಗರು ತಮ್ಮ ಪರಿವಾರ ಸಮೇತಾ ತೀವ್ರ ಚಳಿಯಲ್ಲೂ ( 0 ಡಿಗ್ರಿ ಸೆಲ್ಸಿಯಸ್ ) ಉತ್ಸಾಹದಿಂದ ಭಾಗವಹಿಸಿದ್ದು ನೋಡಿದರೆ ಕನ್ನಡದ ಅಭಿಮಾನ ಎದ್ದು ಕಾಣುತ್ತಿತ್ತು!

ಶ್ರೀ ರಘು ಸೋಸಲೆ ಹೇಮಂತ ಗಾನದ ಬಗ್ಗೆ ವಿವರಣೆ ಕೊಡುತ್ತ ಎಲ್ಲರನ್ನು ಸ್ವಾಗತಿಸಿದ ಮೇಲೆ ..ಶ್ರೀಮತಿ ಅನಿತಾ ಜೋಯಿಸ್ ಅವರು ಹಾಡಿದ ಶ್ರೀಗಣೇಶ ಸ್ತುತಿಯೊಂದಿಗೆ ಗಾನ ಸಂಜೆ ಸರಿಯಾಗಿ 4 ಗಂಟೆಗೆ ಪ್ರಾರಂಭವಾಯಿತು. ನಂತರ ಶ್ರೀ ಯಶವಂತ್ ಗಡ್ಡಿಯವರು ಹಾಡಿದ ಕನ್ನಡ ನಾಡ ಗೀತೆ "ಜೈ ಭಾರತ ಜನನಿಯ ತನುಜಾತೆ ! ಜಯಹೇ ಕರ್ನಾಟಕ ಮಾತೆ ! " ಕೇಳಿಬಂದ ಕೂಡಲೇ ಸಭಿಕರೆಲ್ಲ ಎದ್ದು ನಿಂತು ತಾವೂ ಹಾಡತೊಡಗಿದರು.

ಹೇಮಂತ ಗಾನದ ವಿಶೇಷವೇನೆಂದರೆ ..ಹಾಡು ಹೇಳಲು ಮಕ್ಕಳಿಗೂ ಹಾಗೂ ದೊಡ್ಡವರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದು ! ಮಕ್ಕಳ ಹಾಡು ಆದಮೇಲೆ ದೊಡ್ಡವರ ಹಾಡು ..ಹೀಗೆ ಸರಿಸಮನಾಗಿ ನಡೆದ ಸಮಾರಂಭದಲ್ಲಿ ಮಕ್ಕಳೂ ನಾವೇನೂ ಕಡಿಮಯಿಲ್ಲಎಂಬಂತೆ ಅಚ್ಚ ಕನ್ನಡದಲ್ಲಿ ಶುಶ್ರಾವ್ಯವಾಗಿ ಹಾಡಿದ್ದು ಎಲ್ಲರ ಮನಸೆಳೆಯಿತು.!

ಪೋರ ಮಾ|ಕಶ್ಯಪ್ ಹಾಡಿದ "ತೇರ ಏರಿ ಅಂಬರದಾಗೆ ನೇಸರ ನಗುತಾನೆ" , ಕು|ನಿಷಿತ " ಜೋ ಜೋ ಲಾಲಿ ನಾ ಹಾಡುವೆ .."ಅಂತ ಹಾಡತೊಡಗಿದಾಗ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ ಸಂತೋಷಪಟ್ಟರು.

ನಂತರ ಶ್ರೀ ಮೋಹನ್ ತಮ್ಮ ಮಗಳೊಂದಿಗೆ ಹೇಳಿದ ನಮ್ಮ ಆಟೋರಾಜ ಶಂಕರ್ ನಾಗ್ ರವರ ಪ್ರಸಿದ್ದ " ಜೊತೆ ಜೊತೆಯಲಿ ..ಇರುವೆನು ಹೀಗೆ ಎಂದು" , ಶ್ರೀ ದಿಲೀಪ್ ರವರು ಶುಭಮಂಗಳ ಚಿತ್ರದ "ಹೂವೊಂದು ಬಳಿಬಂದು ಎನ್ನೆದೆ ಸೋಕಿರಲು" ಎಂದು ತಮ್ಮ ಪ್ರೀತಿಯ ಮಡದಿಗಾಗಿ ಕೈಯಲ್ಲಿ ಮಡದಿ ಕೊಟ್ಟ ಪ್ರೀತಿಯ ಗುಲಾಬಿ ಹೂ ಹಿಡಿದು ಶ್ರಾವ್ಯವಾಗಿ ಹೇಳಿದ್ದು ಎಲ್ಲರನ್ನು ಪ್ರೀತಿಯ ಭಾವುಕತೆಯಲ್ಲಿ ತೇಲಿಸಿತ್ತು ಅಂದರೆ ಅತಿಶಯೋಕ್ತಿ ಎನಿಸಲಾರದು !

ಹೀಗೆ ಸಾಲು ಸಾಲಾಗಿ ಹಳೆಯ ಹಾಗು ಹೊಸ ಕನ್ನಡಗೀತೆಗಳ ಜೊತೆಗೆ ಶ್ರೀಮತಿ ಆಶ ಗಡ್ಡಿ ಯವರಿಂದ ಒಂದು ಭಾವಗೀತೆ " ನಿಂತಲ್ಲೇ ನೀರು ನಿಲ್ಲುವುದಿಲ್ಲ , ಹಳ್ಳ ಸಿಕ್ಕಿದ ಕಡೆ ನಡೆಯುವುದಲ್ಲಾ", " ಶ್ರೀಮತಿ ಅಂಜು ಅವರಿಂದ ಪುರಂದರ ದಾಸರ "ರಾಮ ನಾಮ ಪಾಯಸಕ್ಕೆ , ಕೃಷ್ಣ ನಾಮ ಸಕ್ಕರೆ" ದಾಸರ ಪಾದ, ಶ್ರೀಮತಿ ಅನಿತಾ -ಕೃಷ್ಣಮೂರ್ತಿರವರಿಂದ " ಬೆಳದಿಂಗಳ" , ಮಕ್ಕಳಿಂದ ವಾದ್ಯ ಸಂಗೀತ ಎಲ್ಲರ ಮನಸೆಳೆದವು!

ಶ್ರೀ ಜೋ ಕಣ್ಣೂರು ಅವರು ಮಕ್ಕಳಿಗಾಗಿ ನಡೆಸಿಕೊಟ್ಟ ಒಂದು ಚಿಕ್ಕ ಮ್ಯಾಜಿಕ್ ಶೋ ಎಲ್ಲ ಮಕ್ಕಳನ್ನು ಸೆಳೆಹಿಡಿದ ಮೇಲೆ ಕೊನೆಗೆ ಶ್ರೀ ವೇಣು ಗುಡೇರ ಹಾಡಿದ "ಕೊಲವೆರಿ ಕೊಲವೆರಿ ಡಿ" ಹಾಡಿಗೆ ಎಲ್ಲರು ಕುಣಿಯಲು ಆರಂಭಿಸಿದ್ದನ್ನು ನೋಡಿ , ಕೊಲವೆರಿಯಾ ಮ್ಯಾಜಿಕ್ ಅಮೆರಿಕಾವನ್ನು ಬಿಡಲಿಲ್ಲವಲ್ಲ ಅಂತಾ ಅಂದುಕೊಂಡು ಎಲ್ಲ ಕನ್ನಡಿಗರು ಮನೆಯಿಂದ ಮಾಡಿ ತಂದಿದ್ದ ವಿವಿದ ಬಗೆಯ ರುಚಿಯಾದ ಊಟ ಮಾಡಿ ಹೊಯ್ಸಳ ಕನ್ನಡ ಕೂಟದವರಿಗೆ ಧನ್ಯವಾದಗಳನ್ನು ಹೇಳಿ ಮನೆ ಕಡೆ ಹೊರಟಾಗ ರಾತ್ರಿ ಮೇಲಾಗಿತ್ತು !

ಹೀಗೆ ಸರಿಸುಮಾರು ಗಂಟೆಗಳ ತನಕ ನಡೆದ ಗಾನ ಸಂಜೆ ಎಲ್ಲರ ಕಿವಿ , ಮನ ತಣಿಸಿದ್ದಲ್ಲದೆ ಎಲ್ಲರಲ್ಲೂ ಗುಪ್ತವಾಗಿ ಅಡಗಿದ್ದ ಹಾಡುವ ಕಲೆಯನ್ನು ಹೊರಹೊಮ್ಮಿಸಿದ್ದಂತು ಅಕ್ಷರಶ: ನಿಜ !

ಇಂತಿ ನಿಮ್ಮ ಕನ್ನಡಿಗ ,

-ನಾಗರಾಜ್.ಎಂ

 

- ಸಿರಿಗನ್ನಡಂ ಗೆಲ್ಗೆ -


***********************************************************************************

 

ಅಮೆರಿಕಾದ ಕನ್ನೆಕ್ಟಿಕಟ್ನಲ್ಲಿ ದೀಪಾವಳಿ ೨೦೧೧ರ ಸಡಗರ !

ಗಾಳಿಯ ಬಿರುಸಿಗೆ ರಸ್ತೆಯಲ್ಲೆಲ್ಲ ಹಾರಿಬಿದ್ದ ಬಣ್ಣ ಬಣ್ಣದ (ಫಾಲ್ ಕಲರ್) ಮರಗಿಡಗಳ ಎಲೆಗಳು, ಆಗಲೇ ಚಳಿರಾಯನ ಆಗಮನದ ಮುನ್ಸೂಚನೆಯಂತೆ ಜೋರಾಗಿ ಬೀಸುತ್ತಿರುವ ಚಳಿಗಾಳಿ ...ಅಬ್ಬ ಮತ್ತೆ ಬಂತಲ್ಲಪ್ಪ ಚಳಿಗಾಲ ಎನ್ನುತ್ತಾ ಕೋಟು ಏರಿಸಿಕೊಂಡು ಸಂಸಾರದೊಂದಿಗೆ ಕಾರ್ ನಲ್ಲಿ ಹೋಗ್ತಾ ರೇಡಿಯೋ ಬಟನ್ ಒತ್ತಿದಾಗ ಕೇಳಿ ಬರುತ್ತಿರೋ ಅಬ್ಬರದ ನ ವೆಸ್ಟೆರ್ನ್ RAP ಮ್ಯೂಸಿಕ್ ...ಅದಕ್ಕೆ ಸರಿಯಾಗಿ ಹಿಂದೆ ಕೂತು ತಲೆ ತೂಗುತ್ತಿರೋ ಮಗರಾಯ ...ಅಂತು ಇಂತೂ ಕಾರ್ ಪಾರ್ಕ್ ಮಾಡಿ ಒಳಗೆ ಹೋದ ತಕ್ಷಣವೇ ...ಹಾ ಹಾ ..ಸುಮಧುರವಾಗಿ ಕೇಳಿ ಬರುತ್ತಿರುವ ಕನ್ನಡದ ಸುಗಮ ಸಂಗೀತದ ಅಲೆಗಳು , ನಂತರ ಕೇಳಿಬಂದ ಭೀಮಾರ್ಜುನರ ಗಡಸು ಧ್ವನಿಯ ವೀರತೆಯ ಸಂವಾದ , ಸಾವನ್ನೇ ಗೆದ್ದೇ ಎಂದು ಅಟ್ಟಹಾಸ ದಿಂದ ಅಬ್ಬರಿಸುತ್ತಿರುವ ಹಿರಣ್ಯಕಶ್ಯಪು ....ಓಹ್ ..ಇವೆಲ್ಲ ಕೇಳಿ ಎಲ್ಲೋ ಬೆಂಗಳೂರಿನಲ್ಲಿರುವ ರವೀಂದ್ರ ಕಲಾಕ್ಷೇತ್ರ ದೊಳಗೆ ಬಂದಿರೋ ತರಹ ಅನ್ನಿಸುವಂತೆ ಮಾಡಿದ್ದು.. ಈ ದೂರದ ಅಮೆರಿಕಾದಲ್ಲಿನ ಕನ್ನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟದ ವತಿಯಿಂದ ನಡೆದ ದೀಪಾವಳಿ ೨೦೧೧ ಕಾರ್ಯಕ್ರಮ !

Click here to read full article



******************************************************************************************

ಅಮೇರಿಕಾದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆದ ವಿಶ್ವ ವೀರಶೈವ ಸಮ್ಮೇಳನ ..!

ಪಕ್ಕದಲ್ಲಿ ಸದ್ದಿಲ್ಲದೇ ಹರಿಯುತ್ತಿರುವ ನದಿ , ಒಳಗಡೆ ನೋಡಿದರೆ ಎಲ್ಲೆಡೆ ಶಿವಶರಣರ ಭಾವಚಿತ್ರಗಳು, ಭವ್ಯವಾದ ಅನುಭವ ಮಂಟಪದಲ್ಲಿ ಕುಳಿತು ಶರಣರು ಮಾಡುತ್ತಿದ್ದ ಇಷ್ಟಲಿಂಗ ಪೂಜೆ , ವೇದಿಕೆ ಮೇಲೆ ವಿಶ್ವಗುರು ಬಸವಣ್ಣ,ಅಲ್ಲಮ ಪ್ರಭು,ಶರಣೆ ಅಕ್ಕ ಮಹಾದೇವಿ,ಶರಣ ಮಾದಾರ ಚೆನ್ನಯ್ಯ,ಮಡಿವಾಳ  ಮಾಚಿದೇವರು,ಲಿಂಗಾಂಗ ಯೋಗಿ ಸಿದ್ಧರಾಮೇಶ್ವರ ಎಲ್ಲ ಕಾಣಿಸಿಕೊಂಡರೆ ಹೇಗಾಗಿರಬಹುದು ?  ಇದೆಲ್ಲ ಕೇಳಿದೊಡೆ ಎಲ್ಲರ ಚಿತ್ತದಲ್ಲಿ ಒಮ್ಮೆಲೇ.. ವೀರಶೈವ ಧರ್ಮ ಸಂಸ್ಥಾಪಕರಲ್ಲಿ ಮುಖ್ಯರಾದ ವಿಶ್ವಗುರು ಬಸವಣ್ಣನವರ ಬಸವನ ಬಾಗೇವಾಡಿ - ಕೂಡಲ ಸಂಗಮದ ನೆನಪಾದರೆ ಅಚ್ಚರಿ ಏನಿಲ್ಲ ..

Click here to read full article



*****************************************************************************

ಅಮೇರಿಕಾದಲ್ಲಿ ಕನ್ನಡ ಶಾಲೆಯ ವಾರ್ಷಿಕ ಘಟಿಕೋತ್ಸವ ..!

ಕರ್ನಾಟಕದಲ್ಲೇ ಕನ್ನಡ ಶಾಲೆಗಳು ಅಪರೂಪವಾಗಿ ದುರ್ಬೀನ್ ಇಡ್ಕೊಂಡು ಹುಡುಕಾಡೋ ಈ ಕಾಲದಲ್ಲಿ, ಇದ್ದರೂ ಮಕ್ಕಳೇ ಕನ್ನಡ ಶಾಲೆಗೆ ಬಾರದಂತಹ  ಈ ಕಾಲದಲ್ಲಿ ..ದೂರದ ಅಮೇರಿಕಾದ ಕನೆಕ್ಟಿಕಟ್ನಲ್ಲಿ ಇರುವ ಅಮೇರಿಕನ್ನಡ ಶಾಲೆ ಯಶಸ್ವಿಯಾಗಿ ತನ್ನ ಎರಡನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು ಜೂನ್ ೧೮ ರಂದು ಕನೆಕ್ಟಿಕಟ್ನ ಸೌತ್ ವಿಂಡ್ಸರ್ ನಲ್ಲಿ ಏರ್ಪಡಿಸಿತ್ತು! 

ಎಲ್ಲ ಮಕ್ಕಳು ತಮ್ಮ ಪೋಷಕರೊಂದಿಗೆ ಮತ್ತು ಕನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟದ ಪದಾದಿಕಾರಿಗಳು ಸಂಭ್ರಮದಿಂದ ಭಾಗವಹಿಸಿದ್ದ ಈ ೨೦೧೧ ವಾರ್ಷಿಕ ಘಟಿಕೋತ್ಸವ ಕು|ಮೇಘಳ ಪ್ರಾರ್ಥನೆಯೊಂದಿಗೆ ಶುರುವಾದ ಮೇಲೆ, ಶ್ರೀಮತಿ ಅನಿತಾ ಜೋಯಿಸ್ ರವರಿಂದ ಸ್ವಾಗತ ಸಮಾರಂಭ ನಡೆಯಿತು. ರಘು ಸೋಸಲೆಯವರು ಕನ್ನಡ ಶಾಲೆಯ ವಿದ್ಯಾರ್ಥಿಗಳ ಮೇಲೆ ಹಾಡಿದ ಒಂದು ಸುಂದರ ಹಾಡು ಎಲ್ಲರ ಮನ ಸೆಳೆಯಿತು. ನಂತರ ಕನೆಕ್ಟಿಕಟ್ನ ಕನ್ನಡ ಕೂಟ ಅದ್ಯಕ್ಷರಿಂದ ಒಂದು ಪುಟ್ಟ ಭಾಷಣವಾದ ಮೇಲೆ ಪೋಷಕರು ತಮ್ಮ ಅಭಿಪ್ರಾಯಗಳನ್ನು ಎಲ್ಲರೊಂದಿಗೆ ಹಂಚಿಕೊಂಡ ಬಳಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳಿಗೂ ಸರ್ಟಿಫಿಕೇಟ್ ನೊಂದಿಗೆ ಉಚಿತ ಕನ್ನಡ ಪುಸ್ತಕವನ್ನು ನೀಡಲಾಯಿತು. 

ವಂದನಾರ್ಪಣೆಯಾದಮೇಲೆ ಲಘು ಉಪಹಾರದೊಂದಿಗೆ ಈ ಚಿಕ್ಕ ಹಾಗು ಚೊಕ್ಕ ಕನ್ನಡ ಕಾರ್ಯಕ್ರಮಕ್ಕೆ ಪೋಷಕರೊಂದಿಗೆ ಇಂಡಿಯಾದಿಂದ ಆಗಮಿಸಿದ್ದ ಅಜ್ಜ-ಅಜ್ಜಿಯರು ಮಕ್ಕಳ-ಮೊಮ್ಮಕ್ಕಳ ಕನ್ನಡದ ಕಲಿಕೆ , ಅಭಿಮಾನ ನೋಡಿ ಸಂತೋಷಗೊಂಡರೆ ಅಕ್ಷರ ಕಲಿಸಿದ ಶ್ರೀಮತಿ ಅನಿತಾ ಜೋಯಿಸ್ ಹಾಗು ತಂಡದವರಿಗೆ ಏನೋ ಒಂದು ರೀತಿಯ ಸಂತೃಪ್ತಿ , ಸಮಾಧಾನ ...

ಹೀಗೆಯೇ ಈ ಕನ್ನಡ ಶಾಲೆ ಮುಂದೆಯೂ ಯಶಸ್ವಿಯಾಗಿ ನಡೆಯಲಿ ...ಕನ್ನಡದ ಕಂಪನ್ನು ಎಲ್ಲೆಡೆ ಹರಡಲಿ ಎಂದು ಆಶಿಸುವ ...

- ಕನ್ನಡಿಗ



*****************************************************************************

ದೀಪಾವಳಿ ಹಾಗು ರಾಜ್ಯೋತ್ಸವ ಸಡಗರ ಅಮೇರಿಕಾದ ಕನೆಕ್ಟಿಕಟ್ ನಲ್ಲಿ .. ,

ಬಣ್ಣ ಬಣ್ಣದ ಉಡುಗೆ ತೊಟ್ಟು ಫ್ಯಾನ್ಸಿ ಡ್ರೆಸ್ ಶೋಗೆ ರೆಡಿಯಾಗಿ ನಿಂತಿರುವ ಚಿಣ್ಣರು, ಹಬ್ಬದ ಉಡುಗೆಯಲ್ಲಿ ಬಂದಿರುವ ಫೋಷಕರು , ಕಿವಿಗೆ ಕೇಳಿ ಬರುತ್ತಿರುವ ಇಂಪಾದ ಕನ್ನಡ ಗೀತೆಗಳು, ನೃತ್ಯಕ್ಕೆ ರೆಡಿಯಾಗುತ್ತಿರುವ ಮಕ್ಕಳು ...ಯಾವುದೋ ಚಿಣ್ಣರ ಲೋಕಕ್ಕೆ ಬಂದಂತೆ ಅನುಭವ ಆಗಿದ್ದು ಅಮೆರಿಕದಲ್ಲಿನ ಕನೆಕ್ಟಿಕಟ್ ಕನ್ನಡ ಕೂಟ ಏರ್ಪಡಿಸಿದ್ದ ದೀಪಾವಳಿ ಹಾಗು ರಾಜ್ಯೋತ್ಸವ ಸಡಗರ ೨೦೧೦ ದಲ್ಲಿ.

Click here to read full article



*********************************************************************************

ಪ್ರಕೃತಿಯ ಸ್ವರ್ಗ ಅಮೇರಿಕಾದ ನ್ಯೂ ಹ್ಯಾಂಪ್ ಷರ್ !

ಸೆಪ್ಟೆಂಬರ್ ಕಳೆದು ಅಕ್ಟೋಬರ್ ಬಂತೆಂದರೆ ಸಾಕು ! ಹೂವಿನ ಸ್ವರ್ಗವೇ ಬಂದಿಳಿದಂತಿರುತ್ತದೆ ಅಮೇರಿಕಾದ ನ್ಯೂ ಹ್ಯಾಂಪ್ ಷರ್ನಲ್ಲಿ . ಎತ್ತ ನೋಡಿದರೂ ಬಣ್ಣ ಬಣ್ಣದ ಗಿಡಮರಗಳು , ಹೂವಿನ ರಾಶಿಯನ್ನೇ ಹೊದ್ದಿರುವಂತೆ ಕಾಣುವ ಬೆಟ್ಟ ಪರ್ವತಗಳು , ಸಣ್ಣ ಸಣ್ಣ ಫಾರ್ಮ್ ಹೌಸ್ಗಳು , ಅಂಕು ಡೊಂಕಾದ ಸುಂದರವಾದ ರಸ್ತೆಗಳು.

Click here to read full article









Submit Your Comments :

Mailform example

Subject:


Your Name:


Your Email Address:


Comments: