Fordesis - Articles

Unlock your phone




ಪ್ರಕೃತಿಯ ಸ್ವರ್ಗ ಅಮೇರಿಕಾದ ನ್ಯೂ ಹ್ಯಾಂಪ್ ಷರ್ !

ಸೆಪ್ಟೆಂಬರ್ ಕಳೆದು ಅಕ್ಟೋಬರ್ ಬಂತೆಂದರೆ ಸಾಕು ! ಹೂವಿನ ಸ್ವರ್ಗವೇ ಬಂದಿಳಿದಂತಿರುತ್ತದೆÿ ಅಮೇರಿಕಾದ ನ್ಯೂ ಹ್ಯಾಂಪ್ ಷರ್ನಲ್ಲಿ .ÿ ಎತ್ತ ನೋಡಿದರೂ ಬಣ್ಣ ಬಣ್ಣದ ಗಿಡಮರಗಳು , ಹೂವಿನ ರಾಶಿಯನ್ನೇ ಹೊದ್ದಿರುವಂತೆ ಕಾಣುವ ಬೆಟ್ಟ ಪರ್ವತಗಳು , ಸಣ್ಣ ಸಣ್ಣ ಫಾರ್ಮ್ ಹೌಸ್ಗಳು , ಅಂಕು ಡೊಂಕಾದ ಸುಂದರವಾದ ರಸ್ತೆಗಳು.

ಬೇಸಿಗೆ ಮುಗಿದು ಇನ್ನೇನು ಚಳಿರಾಯ ನಾ ಬರಲೇ ಎಂದು ಇಣುಕಿ ನೋಡುತ್ತಿರುವ ಸಮಯದಲ್ಲಿ ಬರುವ ಈ ಫಾಲ್ (Autumn ) ಸೀಸನ್ ನೋಡುವುದೇ ಒಂದು ಸೊಬಗು !ÿ ವಾತಾವರಣÿ , ಹವಾಮಾನ ದಲ್ಲಿನ ಬದಲಾವಣೆ , ಹೆಚ್ಚಾಗುವ ರಾತ್ರಿ ವೇಳೆ , ಚಳಿಗಾಳಿ , ಮಳೆ , ಕಡಿಮೆಯಾಗುವ ಸೂರ್ಯನ ಪ್ರಖರತೆÿ ಇವೆಲ್ಲ ಕಾರಣಗಳಿಂದ ಎಲೆಗಳಲ್ಲಿ ಕ್ರೋಮೊಫ್ಹಿಲ್ ಉತ್ಪಾದನೆ ಕಡಿಮೆಯಾಗಿ , ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಹೊರಗಡೆ ಹೋಗದೆÿ ಎಲ್ಲ ಗಿಡಮರಗಳಲ್ಲಿನ ಎಲೆಗಳು ತಮ್ಮ ಹಸಿರು ಬಣ್ಣದಿಂದ ಕೆಂಪು , ಹಳದಿ , ಕಂದು , ಪಿಂಕ್ ಕಲರ್ ಗೆÿ ತಿರುಗಿÿ ಜೋರಾಗಿ ಬೀಸುವ ತಂಗಾಳಿಗೆ ಎಲ್ಲ ಎಲೆಗಳು ಬಿದ್ದು ಹೋಗಿ ಕಾಣುವ ದೃಶ್ಯ ಮನೋಹರವಾದದ್ದು!

ನ್ಯೂಯಾರ್ಕ್ ನಿಂದ 6 ಗಂಟೆ ದೂರದಲ್ಲಿ , ಕೆನಡ ದೇಶಕ್ಕೆ ಹೊಂದಿಕೊಂಡಿರುವ ಈÿ ನ್ಯೂ ಹ್ಯಾಂಪ್ ಷರ್ನಲ್ಲಿರುವ ವೈಟ್ ಮೌಂಟೈನ್ (ಬಿಳಿ ಪರ್ವತಗಳು) ಅಂತೂ ಈ ಸಮಯದಲ್ಲಿ ಬಣ್ಣ ಬಣ್ಣದ ಹೂವಿನ ರಸಿಯಿಂದ ಅಲಂಕೃತವಾದÿ ನವ ವಧುವಿನಂತೆ ಕಂಗೊಳಿಸುತ್ತಾ ವಿಶ್ವದೆಲ್ಲೆಡೆಯಿಂದÿ ಜನರನ್ನು ಆಕರ್ಷಿಸುತ್ತದೆ . ಬೇಸಿಗೆಯಲ್ಲಿ ಹಚ್ಚ ಹಸಿರಿನಿಂದ , ಚಳಿಗಾಲದಲ್ಲಿ ಹಿಮದಿಂದ ಆವೃತವಾಗಿ ಬೆಳ್ಳಗೆ ಕಾಣಿಸುವ ಈ ನಯನ ಮನೋಹರ ನ್ಯೂ ಹ್ಯಾಂಪ್ ಷರ್ÿ ಪ್ರಣಯಿಗಳಿಗೆ , ಹನಿಮೂನರ್ಸ್ಗೆ , ಛಾಯಚಿತ್ರಕಾರರಿಗೆ , ಬೆಟ್ಟಹತ್ತುವÿ ಸಾಹಸಿಗರಿಗೆ , ಸ್ಕೀಯಿಂಗ್ ಮಾಡುವವರಿಗೆ , ಹಾಯಾಗಿ ನಿರ್ವತ್ತ ಜೀವನ ಮಾಡಲು ಬಯಸುವ ಹಿರಿಯರಿಗೆÿ ಭೂಲೋಕದಲ್ಲಿನ ಸ್ವರ್ಗವಿದ್ದಂತೆ !

ಒಂದು ಕಡೆÿ ಹಾ! ಹಾ!ÿ ಏನು ಸುಂದರವಾಗಿದ್ದಾವಲ್ಲÿ ಈ ಗಿಡಮರಗಳು ಅನ್ನುತ್ತ ತಮ್ಮ ಕಣ್ಮನ ತುಂಬಿಕೊಳ್ಳುವÿ ಮನುಜರು ....ಮತ್ತೊಂದುಕಡೆ ತಮ್ಮಲ್ಲಿನ ಎಲ್ಲ ಎಲೆಗಳನ್ನು ಕಳೆದುಕೊಂಡು ನಗ್ನತೆಯಿಂದÿ ಮೈ ಕೊರೆಯುವ ಚಳಿಗೆ ಮೈಯೊಡ್ಡಿ ನಿಲ್ಲಲುÿ ಬೇಸರಿಸಿಕೊಂಡು ತಯಾರಾಗುತ್ತಿರುವÿ ಈ ಗಿಡಮರಗಳು .....ಎಲ್ಲ ಪ್ರಕೃತಿಯ ವಿಸ್ಮಯ !

ಜೀವನದಲ್ಲಿ ಒಮ್ಮೆಯಾದರೂ ಈ ಫಾಲ್ ಸೀಸನ್ÿ ಕಲರ್ಸ್ ನೋಡಲೇ ಬೇಕಾದಂಥದ್ದು ...

- ನಾಗರಾಜ್. ಎಂ









Submit Your Comments :

Mailform example

Subject:


Your Name:


Your Email Address:


Comments: